ಸೇವೆಗಳು

ಪರಿಕಲ್ಪನೆಯಿಂದ ಪರಿಪೂರ್ಣತೆಯ ವರೆಗೆ ನಾವು ಎಲ್ಲ ಸೇವೆಗಳನ್ನು ಒದಗಿಸುತ್ತೇವೆ. ಈ ಸೇವೆಗಳನ್ನು ಗಮನಿಸಿ:

 • ಮನೆಕಟ್ಟಲು ಹೊರಟಿರುವ ವಿಭಿನ್ನ ಜನರ ಅಭಿರುಚಿಗಳಿಗೆ ಹೊಂದುವ ವಿನ್ಯಾಸಗಳನ್ನು ನಾವು ರೂಪಿಸುತ್ತೇವೆ. ೩೦ ಎತ್ತರದಿಂದ ಹಿಡಿದು(?) ಮನೆಯೊಳಗಿನ ನಡೆದಾರಿಗಳಿಂದ ಹಿಡಿದು ನಿಮ್ಮ ಮನೆಯ ಕೊನೆಕುಸುರಿಯ ಮಾದರಿಯವರೆಗೆ ಕಟ್ಟಡದ ಎಲ್ಲ ಅಂಶಗಳನ್ನೂ ನಮ್ಮ ವಾಸ್ತುಶಿಲ್ಪದಲ್ಲಿ ನೀವು ಕಾಣುವಿರಿ.

  ವಾಸ್ತುಶಿಲ್ಪ
 • ಕನಸಿನ ಮನೆಯ ಅಂತಿಮ ಶಿಲ್ಪದ ನಕ್ಷೆಗಳ ಆಧಾರದ ಮೇಲೆ ನಾವು ಮನೆಯ ರಚನೆ, ವಿದ್ಯುತ್-ಯಾಂತ್ರಿಕ, ಮತ್ತು ನಿಮ್ಮ ಮನೆಯನ್ನು ಕಟ್ಟಲು ಬೇಕಾದ ಎಲ್ಲ ವಿವರಗಳನ್ನು ನಾವು ವಿನ್ಯಾಸ ಮಾಡುತ್ತೇವೆ.

  ವಿನ್ಯಾಸ
 • ಮನೆಕಟ್ಟುವಾಗ ನಾವು ಬಹಳಷ್ಟು ಮಂದಿ ಈ ವಿಷಯವನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಅನುಮತಿ ಪಡೆಯಲು ಸಹಾಯಮಾಡಬಹುದಾದ ಜನರನ್ನು ಗುರುತಿಸುವುದು, ಪರವಾನಿಗೆಗಾಗಿ ಕಾಯುವುದು ಎಲ್ಲವೂ ಬಹಳಷ್ಟು ತಲೆಬಿಸಿ ಮಾಡುತ್ತದೆ. ಈ ಎಲ್ಲ ನಿಯಮಗಳು ನಮಗೆ ಸ್ಪಷ್ಟವಾಗಿ ತಿಳಿದಿರುವುದರಿಂದ ನಿಮ್ಮ ತಲೆಬಿಸಿಯಾಗದಂತೆ ನಾವು ಎಲ್ಲ ರೀತಿಯ ಅನುಮತಿ/ ಪರವಾನಿಗೆ/ ದೃಢೀಕರಣಗಳನ್ನು ಪಡೆದುಕೊಡುತ್ತೇವೆ.

  ಸರಕಾರಿ (ಪರವಾನಿಗೆ/ ಅನುಮತಿ/)ಅನುಮೋದನೆ
 • ನಾವು ಶ್ರೇಷ್ಟ ಗುಣಮಟ್ಟ, ಸುರಕ್ಷತೆ, ಕಾಲಮಿತಿಯ ಸೇವೆಗೆ ಹೆಸರುವಾಸಿಯಾದ ಬ್ರಾಹ್ಮೀ ಕನ್ ಸ್ತ್ರಕ್ಷನ್, ಪ್ರೊಮಾಕ್ಸ್ ಸಂಸ್ಥೆಗಳ ಜೊತೆಜೊತೆಯಲ್ಲಿ ನಿರ್ಮಾಣ ಕಾರ್ಯದಲ್ಲಿ ನಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ನಿರ್ಮಾಣಕಾರ್ಯದಲ್ಲಿ ನಮಗೆ ಅಗಾಧವಾದ ಅನುಭವವಿದೆ. ಈ ನಿಟ್ಟಿನಲಿ ನಮಗೆ ಇರುವ ಹೆಮ್ಮೆಯೊಂದಿಗೆ ನಾವು ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನಿಮಗೆ ಒದಗಿಸುತ್ತೇವೆ.

  ನಿರ್ಮಾಣ
 • ನಮ್ಮ ಸುದೀರ್ಘ ಅನುಭವ ಹಾಗೂ ಬೃಹತ್ ಪ್ರಮಾಣದ ಕೊಳ್ಳುವ ಸಾಮರ್ಥ್ಯದಿಂದಾಗಿ ನಿಮ್ಮ ಮನೆಯ ನಿರ್ಮಾಣವನ್ನು ಮಾರುಕಟ್ಟೆಯಲ್ಲಿ ನಿಗದಿತ ಬೆಲೆಗಿಂತ ಕಡಿಮೆ ವೆಚ್ಚದಲ್ಲಿ ಮಾಡಿಕೊಡುತ್ತೇವೆ.

  ಜಾಗರೂಕ ಖರ್ಚುವೆಚ್ಚ
 • ಮನೆಯ ಒಳಗೆ ಮತ್ತು ಹೊರಗೆ ವಿದ್ಯುತ್ ಕಾಮಗಾರಿಗಳಿಂದ ನಿಮ್ಮ ಮನೆಯನ್ನು ಅಣಿಗೊಳಿಸಿ ಬೆಳಗಿಸಲು ಸರಕಾರಿ ಪರವಾನಿಗಿ/ಅನುಮತಿ ಯ ಜೊತೆಗೆ ಇತರೆಲ್ಲ ಸೇವೆಗಳನ್ನೂ ನಾವು ಮಾಡಿಕೊಡುತ್ತೇವೆ.

  ವಿದ್ಯುತ್ ಕೆಲಸ
 • ಕೊಳಾಯಿ ಕೆಲಸ ಮಾಡಿಕೊಡುವುದರ ಜೊತೆಗೆ ನೀರಿನ ಕೊರತೆಯನ್ನು ಕಡಿಮೆ ಮಾಡಲು ಅಗತ್ಯವಾದ ಗುಣಮಟ್ಟದ ಕಾಮಗಾರಿಯನ್ನೂ ಮಾಡಿಕೊಡುತ್ತೇವೆ.

  ಕೊಳಾಯಿ ಕೆಲಸ
 • ಹೊರಗಿನಿಂದ ಅದ್ಭುತವಾಗಿ ಕಾಣುವ ಮನೆ, ಒಳಗಿಂದಲೂ ಹಾಗೆ ಕಾಣಬೇಕು. ಈ ಆಂತರಿಕ ವಿನ್ಯಾಸವನ್ನು ನಮ್ಮ ವಾಸ್ತುಶಿಲ್ಪಿಗಳು ನಿಮಗಾಗಿ, ನಿಮ್ಮ ನೆಚ್ಚಿನ ಹಾಗೆಯೇ ವಿನ್ಯಾಸ ಮಾಡಿ ಕೊಡುವರು. ಪೀಠೋಪಕರಣ ದಿಂದ ಬಟ್ಟೆಯ ಸಂಗ್ರಹ ದಿಂದ ಪ್ರತಿಯೊಂದು ವಿದ್ಯುನ್ಮಾನ ಪದಾರ್ಥಗಳನ್ನು ನೀವು ಕೊಂಡುಕೊಳ್ಳುವಾಗ, ನಾವು ನಿಮಗೆ ಸಹಾಯ ಮಾಡುತ್ತೇವೆ.

  ಆಂತರಿಕ ವಿನ್ಯಾಸ
 • ಹಸುರು ಮನೆಯನ್ನು ಹಸನುಗೊಳಿಸುತ್ತದೆ. ತಜ್ಞರ ಸಲಹೆಯಂತೆ ಪ್ರಕೃತಿಯ ಬೆಸುಗೆಯಿಂದ ನಿಮ್ಮ ಮನೆಯನ್ನು ಚಂದಗಾಣಿಸಲು ನಾವು ಸೂಕ್ತ ಪರಿಹಾರಗಳನ್ನು ಒದಗಿಸಿ ನಿಮ್ಮ ಮನೆ ಪ್ರಕೃತಿಯ ಮಡಿಲ ಮಗುವಾಗಿ ಕಂಗೊಳಿಸುವಂತೆ ಮಾಡಿಕೊಡುತ್ತೇವೆ.

  ಸುಂದರ ಅಂಗಣ

Copyright © 2016 Buildahome. All rights reserved by ScenicBeauty Homes Pvt Ltd.